\

ನಮ್ಮ ಬಗ್ಗೆ

ಸರ್ಕಾರಿ ಪಾಲಿಟೆಕ್ನಿಕ್, ಹರಪನಹಳ್ಳಿಯು 2009 ನೇ ಇಸವಿಯಲ್ಲಿ ಆರಂಭಗೊಂಡ ಕರ್ನಾಟಕದ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಇದೆ. ಈ ಸಂಸ್ಥೆಯು ಎಐಸಿಟಿಇ, ನವದೆಹಲಿ ಇಂದ ಅನುಮೋದಿಸಲಾಗಿದ್ದು, ತಾಂತ್ರಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೂರು ವರ್ಷದ ಡಿಪ್ಲೋಮಾ ಪ್ರೋಗ್ರಾಮ್ಗಳನ್ನು ಈ ಕೆಳಗಿನ ವಿಷಯಗಳಲ್ಲಿ ನೀಡುತ್ತಿದೆ. :

  • ಕಾಮಗಾರಿ ವಿಭಾಗ
  • ಗಣಕಯಂತ್ರ ವಿಭಾಗ
  • ವಿದ್ಯುನ್ಮಾನ ಮತ್ತು ಸಂವಹನ ವಿಭಾಗ
  • ಯಾಂತ್ರಿಕ ವಿಭಾಗ

ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ತಾಂತ್ರಿಕ ಶಿಕ್ಷಣವನ್ನು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲುಪಿಸಲು ಸತತ ಪ್ರಯತ್ನ ನಡೆಸುತ್ತಿದ್ದೇವೆ. ಈ ಸಂಸ್ಥೆಯನ್ನು ಉತ್ತಮ ಕಲಿಕಾ ಮತ್ತು ಅಭಿವೃದ್ದಿ ಕ್ಷೇತ್ರವನ್ನಾಗಿಸುವುದು ನಮ್ಮ ಧ್ಯೇಯವಾಗಿದೆ. ಈ ಅಂಶವು ಸಮುದಾಯಕ್ಕೆ ಮತ್ತೆ ಆರ್ಥಿಕತೆಗೆ ಉತ್ತಮ ಆಡಳಿತ ಮತ್ತು ಸೇವೆಗಳನ್ನು ಒದಗಿಸಲು ಸುಗಮಗೊಳಿಸಿದೆ.

ನಮ್ಮ ಸಂಸ್ಥೆಯು ಸುತ್ತಮುತ್ತಲಿನ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ಉತ್ತಮ ಸಂಬಂಧಹೊಂದಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ.